ನಮ್ಮ ‘DD Time Learn’ ಬ್ಲಾಗ್‌ಗೆ ಸ್ವಾಗತ! “ಆರೋಗ್ಯವೇ ಭಾಗ್ಯ” ಎಂಬ ಮಾತಿದೆ. ನಮ್ಮ ದೈನಂದಿನ ಜೀವನದ ಸಣ್ಣಪುಟ್ಟ ಅಭ್ಯಾಸಗಳೇ ನಮ್ಮ ಭವಿಷ್ಯದ ಆರೋಗ್ಯವನ್ನು ನಿರ್ಧರಿಸುತ್ತವೆ. ನಾವು ಸದಾ ಕಾಲ ಆರೋಗ್ಯವಾಗಿ ಮತ್ತು ಉಲ್ಲಾಸದಿಂದ ಇರಲು ಪ್ರತಿದಿನ ಪಾಲಿಸಲೇಬೇಕಾದ 10 ಸರಳ ಹಾಗೂ ಅತ್ಯುತ್ತಮ ಅಭ್ಯಾಸಗಳ ಪಟ್ಟಿ ಇಲ್ಲಿದೆ:
Health Tips Kannada
1. ವಾಕಿಂಗ್ (Walking): ದೇಹದ ಚೈತನ್ಯ ಹೆಚ್ಚಿಸಲು ಪ್ರತಿದಿನ ಕನಿಷ್ಠ ಅರ್ಧ ಗಂಟೆ (30 ನಿಮಿಷ) ನಡೆಯುವ ಅಭ್ಯಾಸ ಮಾಡಿಕೊಳ್ಳಿ.
2. ಯೋಗ (Yoga): ಪ್ರತಿದಿನ 20 ನಿಮಿಷಗಳ ಕಾಲ ಯೋಗವನ್ನು ಮಾಡಿ ಮತ್ತು ನಿಮ್ಮ ಆರೋಗ್ಯಕ್ಕಾಗಿ ಪ್ರತಿದಿನ ಆ ಸಮಯವನ್ನು ಮೀಸಲಿಡಿ.
3. ನೀರಿನ ಸೇವನೆ (Hydration): ದೇಹವನ್ನು ನಿರ್ಜಲೀಕರಣದಿಂದ (Dehydration) ಕಾಪಾಡಲು ಪ್ರತಿದಿನ ಕನಿಷ್ಠ 3 ಲೀಟರ್ ನೀರನ್ನು ಕಡ್ಡಾಯವಾಗಿ ಕುಡಿಯಬೇಕು.
4. ಊಟದ ಸರಿಯಾದ ಕ್ರಮ: ಬೆಳಗ್ಗೆ ಹೆಚ್ಚಾಗಿ (Heavy) ಆಹಾರವನ್ನು ಸೇವಿಸಿ, ಮಧ್ಯಾಹ್ನ ಮಧ್ಯಮವಾಗಿ (Medium) ಸೇವಿಸಿ ಮತ್ತು ರಾತ್ರಿ ಹೊಟ್ಟೆ ಹಗುರವಾಗಿರುವಂತೆ ಅತಿ ಕಡಿಮೆ (Light) ಆಹಾರವನ್ನು ತಿನ್ನಬೇಕು.
5. ನೆಮ್ಮದಿಯ ನಿದ್ರೆ (Sleep): ದೇಹದ ಆಯಾಸ ದೂರವಾಗಲು ಪ್ರತಿದಿನ 8 ಗಂಟೆಗಳ ಕಾಲ ಕಡ್ಡಾಯವಾಗಿ ನಿದ್ರೆ ಮಾಡಿ.
6. ಧ್ಯಾನ (Meditation): ಮಾನಸಿಕ ಶಾಂತಿಗಾಗಿ ಪ್ರತಿದಿನ 15 ನಿಮಿಷಗಳ ಕಾಲ ಯಾವುದೇ ಯೋಚನೆಗಳಿಲ್ಲದೆ ಶಾಂತವಾಗಿ ಕುಳಿತುಕೊಳ್ಳಿ.
7. ನಗು (Smile): ನಗುವೇ ಅತ್ಯುತ್ತಮ ಮದ್ದು. ಪ್ರತಿದಿನ ಕನಿಷ್ಠ ಮೂರು ಜನರನ್ನು ನಗುವಂತೆ ಮಾಡಿ, ಇದರಿಂದ ನಿಮ್ಮ ಮಾನಸಿಕ ಆರೋಗ್ಯವೂ ವೃದ್ಧಿಯಾಗುತ್ತದೆ.
8. ದುಶ್ಚಟಗಳಿಂದ ದೂರವಿರಿ: ಮದ್ಯಪಾನ ಮತ್ತು ಧೂಮಪಾನಗಳಂತಹ ಹಾನಿಕಾರಕ ಚಟಗಳಿಂದ ಸಂಪೂರ್ಣವಾಗಿ ದೂರವಿರಿ.
9. ಬಿಳಿ ವಿಷಗಳಿಗೆ ಕಡಿವಾಣ: ನಿಮ್ಮ ದೈನಂದಿನ ಆಹಾರದಲ್ಲಿ ಸಕ್ಕರೆ, ಉಪ್ಪು ಮತ್ತು ಎಣ್ಣೆಯ ಪ್ರಮಾಣವನ್ನು ಆದಷ್ಟು ಕಡಿಮೆ ಮಾಡಿ.
10. ಹಸಿ ತರಕಾರಿ-ಹಣ್ಣುಗಳು: ಪ್ರತಿದಿನ ನಿಮ್ಮ ಆಹಾರದಲ್ಲಿ ಹಸಿ ತರಕಾರಿಗಳು ಮತ್ತು ತಾಜಾ ಹಣ್ಣುಗಳನ್ನು ಕಡ್ಡಾಯವಾಗಿ ತಿನ್ನುವ ಅಭ್ಯಾಸವನ್ನು ಮಾಡಿಕೊಳ್ಳಿ.
ಸದಾ ಆರೋಗ್ಯವಾಗಿರಲು ನೀವು ಗಮನಿಸಲೇಬೇಕಾದ ಇತರ ಪ್ರಮುಖ ನಿಯಮಗಳು:
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು: ಬೆಳಗ್ಗೆ ಎದ್ದ ನಂತರ ಖಾಲಿ ಹೊಟ್ಟೆಗೆ ಒಂದು ಲೋಟ ಬಿಸಿ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಈ ರೀತಿ ಕುಡಿಯುವುದರಿಂದ ನಮ್ಮ ಶರೀರದಲ್ಲಿರುವ ವಿಷಕಾರಿ ಪದಾರ್ಥಗಳನ್ನು (Toxins) ಹೊರಗೆ ಹಾಕಲು ಮತ್ತು ಜೀರ್ಣಕ್ರಿಯೆ ಸುಧಾರಿಸಲು ಸಹಾಯವಾಗುತ್ತದೆ.
ರಾತ್ರಿ ಎಣ್ಣೆ ಪದಾರ್ಥಗಳಿಗೆ ಗುಡ್ ಬೈ: ರಾತ್ರಿ ವೇಳೆಯಲ್ಲಿ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು, ಮಸಾಲೆಯುಕ್ತ ಹಾಗೂ ಹೆಚ್ಚು ಕೊಬ್ಬು (Fat) ಇರುವ ಆಹಾರವನ್ನು ಯಾವುದೇ ಕಾರಣಕ್ಕೂ ಸೇವನೆ ಮಾಡಬಾರದು.
ಪ್ರೋಟೀನ್ ಭರಿತ ಆಹಾರ ಅತ್ಯಗತ್ಯ: ನಮ್ಮ ಸ್ನಾಯುಗಳ ಬೆಳವಣಿಗೆಗೆ ಪ್ರೋಟೀನ್‌ಗಳ ಸೇವನೆ ತುಂಬಾ ಮುಖ್ಯ. ಹಾಗಾಗಿ ಪ್ರೋಟೀನ್ ಹೇರಳವಾಗಿರುವ ಆಹಾರ ಪದಾರ್ಥಗಳಾದ ಮೊಟ್ಟೆ, ಮೊಳಕೆ ಬರಿಸಿದ ಕಾಳುಗಳು ಇತ್ಯಾದಿಗಳನ್ನು ಪ್ರತಿದಿನ ಸೇವಿಸಬೇಕು.
ನಿಧಾನವಾಗಿ ಊಟ ಮಾಡಿ: ಪ್ರತಿದಿನ ಆಹಾರ ಸೇವಿಸುವಾಗ ಸಮಾಧಾನವಾಗಿ, ಚೆನ್ನಾಗಿ ಅಗಿದು ತಿನ್ನುವ ಅಭ್ಯಾಸವನ್ನು ಮಾಡಿಕೊಳ್ಳಿ. ಬೇರೆ ಕೆಲಸಗಳಿಗೆ ಸಮಯವಾಗುತ್ತದೆ ಎಂದು ಆತುರಾತುರವಾಗಿ, ಬೇಗ ಬೇಗನೆ ತಿನ್ನುವ ಅಭ್ಯಾಸ ಖಂಡಿತ ಒಳ್ಳೆಯದಲ್ಲ.
ಅತಿಯಾದ ಹುಳಿ ಪದಾರ್ಥ ಬೇಡ: ಆಹಾರದಲ್ಲಿ ಅತಿಯಾದ ಹುಳಿ ಪದಾರ್ಥಗಳನ್ನು ಹೆಚ್ಚಾಗಿ ಸೇವನೆ ಮಾಡಬಾರದು. ಇದರಿಂದ ಗ್ಯಾಸ್ಟ್ರಿಕ್ (Gastric) ಅಥವಾ ಅಸಿಡಿಟಿ (Acidity) ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಹುಳಿ ಪದಾರ್ಥಗಳನ್ನು ಮಿತವಾಗಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.