BSF ಹೊಸ ಪ್ಲಾನ್ (BSF New Plan)
ನಮ್ಮ ದೇಶದ ಗಡಿಯೊಳಗೆ ಅಕ್ರಮವಾಗಿ ನುಗ್ಗಿ, ಇಲ್ಲಿನ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಿರುವ ಬಾಂಗ್ಲಾ ವಲಸಿಗರು ನಮ್ಮ ದೇಶದೊಳಗೆ ಬರದಂತೆ ತಡೆಯಲು ಭಾರತೀಯ ಗಡಿ ಭದ್ರತಾ ಪಡೆ (BSF) ಇದೀಗ ಕಠಿಣ ಹಾಗೂ ವಿಭಿನ್ನವಾದ ಮಾಸ್ಟರ್ ಪ್ಲಾನ್ ಒಂದನ್ನು ರೂಪಿಸಿದೆ. ಭಾರತ ಮತ್ತು ಬಾಂಗ್ಲಾದೇಶ ಗಡಿಯ ಮೂಲಕ ಅಕ್ರಮವಾಗಿ ದೇಶದೊಳಗೆ ನುಸುಳುವ ವಲಸಿಗರನ್ನು ತಡೆಯಲು, ಗಡಿಯಲ್ಲಿ ವಿಷಕಾರಿ ಹಾವುಗಳು ಹಾಗೂ ಅಪಾಯಕಾರಿ ಮೊಸಳೆಗಳನ್ನು ನಿಯೋಜಿಸಲು ಗಂಭೀರ ಚಿಂತನೆ ನಡೆಸಿದೆ.
ಹೌದು, ನೀವು ಓದುತ್ತಿರುವುದು ಅಕ್ಷರಶಃ ನಿಜ. ಇದು ಬಿಎಸ್‌ಎಫ್ (BSF) ಪಡೆಗಳು ಅಕ್ರಮ ನುಸುಳುಕೋರರಿಗೆ ಕಟ್ಟುನಿಟ್ಟಿನ ವಾರ್ನಿಂಗ್ ನೀಡುತ್ತಿರುವ ಅತಿದೊಡ್ಡ ಶಾಕ್ ಎನ್ನಬಹುದು. ಈ ಹೊಸ ಕಾರ್ಯಾಚರಣೆಯ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
ಹಾವು, ಮೊಸಳೆಗಳ ನಿಯೋಜನೆ ಏಕೆ?
ಭಾರತ-ಬಾಂಗ್ಲಾ ಗಡಿಯಲ್ಲಿ ತಂತಿ ಬೇಲಿ (Fencing) ಇಲ್ಲದ ಪ್ರದೇಶಗಳ ಮೂಲಕ ಬಾಂಗ್ಲಾದೇಶದಿಂದ ಅಕ್ರಮ ವಲಸಿಗರು ದಿನೇ ದಿನೇ ಹೆಚ್ಚಿನ ಸಂಖ್ಯೆಯಲ್ಲಿ ಭಾರತದೊಳಗೆ ನುಸುಳುತ್ತಿದ್ದಾರೆ. ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಾ, ನಮ್ಮ ದೇಶದ ಎಲ್ಲಾ ಸೌಲಭ್ಯಗಳನ್ನು ಇವರು ಬಳಸಿಕೊಳ್ಳುತ್ತಿದ್ದಾರೆ. ಗಡಿಯಲ್ಲಿ ಎಷ್ಟೇ ಕಣ್ಗಾವಲು ಇರಿಸಿದರೂ ನುಸುಳುಕೋರರ ಹಾವಳಿ ತಪ್ಪಿಲ್ಲ. ಈ ಕಾರಣದಿಂದ ಇಂತಹ ಅಕ್ರಮ ವಲಸಿಗರಿಗೆ ಬ್ರೇಕ್ ಹಾಕುವ ಉದ್ದೇಶದಿಂದ, ತಂತಿಬೇಲಿ ಅಳವಡಿಸಲಾಗದ ಜಾಗಗಳಲ್ಲಿ ವಿಷಕಾರಿ ಸರ್ಪಗಳು ಮತ್ತು ಅಪಾಯಕಾರಿ ಮೊಸಳೆಗಳನ್ನು ಬಿಡಲು ಸೇನೆ ಮುಂದಾಗಿದೆ.
ದೆಹಲಿಯಲ್ಲಿ ಉನ್ನತ ಮಟ್ಟದ ಸಭೆ:
ಈಗಾಗಲೇ ಈ ಪ್ರಸ್ತಾವನೆಯನ್ನು ಅಂತಿಮಗೊಳಿಸುವ ಹಂತಕ್ಕೆ ತರಲಾಗಿದೆ. ವರದಿಗಳ ಪ್ರಕಾರ, ಫೆಬ್ರವರಿ 9 ರಂದು ಮಹಾನಿರ್ದೇಶಕ ಪ್ರವೀಣ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಪ್ರಸ್ತಾವನೆ ಮಂಡಿಸಲಾಗಿತ್ತು. ಇದೀಗ ಮಾರ್ಚ್ 20 ರಂದು ನವದೆಹಲಿಯಲ್ಲಿರುವ BSF ಪ್ರಧಾನ ಕಚೇರಿಯಲ್ಲಿ ಈ ಬಗ್ಗೆ ಉನ್ನತ ಮಟ್ಟದ ಚರ್ಚೆಗಳು ನಡೆದಿವೆ. ಕೇಂದ್ರ ಸರ್ಕಾರದ ಒಪ್ಪಿಗೆ ಸಿಕ್ಕ ಕೂಡಲೇ ಈ ಯೋಜನೆ ಜಾರಿಗೆ ಬರಲಿದೆ.