ಗೂಗಲ್ ಪೇ, ಫೋನ್ ಪೇ ಬಳಕೆದಾರರ ಗಮನಕ್ಕೆ: ಹೊಸಬರಿಗೆ 10,000 ರೂ. ಗಿಂತ ಹೆಚ್ಚು ಹಣ ಕಳಿಸಿದರೆ 1 ಗಂಟೆ ಲಾಕ್!

ನಮಸ್ಕಾರ ಸ್ನೇಹಿತರೆ, ‘DD Time Learn’ ಬ್ಲಾಗ್‌ಗೆ ಸ್ವಾಗತ! ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಫೋನ್ ಪೇ, ಗೂಗಲ್ ಪೇ ಅಂತಹ ಡಿಜಿಟಲ್ ಪೇಮೆಂಟ್ಸ್ (UPI) ಅನ್ನು ಅವಲಂಬಿಸಿದ್ದಾರೆ. ನೀವು ಹಣ ಹಾಕಿದ ತಕ್ಷಣ ಅವರ ಅಕೌಂಟಿಗೆ ತಕ್ಷಣ ರಿಸೀವ್ ಆಗುತ್ತಿತ್ತು. ಆದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಈ ವೇಗಕ್ಕೆ ಒಂದು ಬ್ರೇಕ್ ಹಾಕಲು ಸಜ್ಜಾಗಿದೆ. ಯುಪಿಐ ಪೇಮೆಂಟ್‌ಗಳಿಗೆ ಸಂಬಂಧಿಸಿದಂತೆ ಆರ್‌ಬಿಐ ಹೊಸ ನಿಯಮಗಳನ್ನು ಜಾರಿಗೆ ತರಲು ಚಿಂತನೆ ನಡೆಸುತ್ತಿದೆ. ಅದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ಏನಿದು ಹೊಸ ಯುಪಿಐ ರೂಲ್ಸ್?

ಆರ್‌ಬಿಐ ಬಿಡುಗಡೆ ಮಾಡಿರುವ ಹೊಸ ಡಿಸ್ಕಷನ್ ಪೇಪರ್ (Discussion Paper) ಪ್ರಕಾರ, ನೀವು ಯಾರಿಗಾದರೂ ಮೊದಲ ಬಾರಿಗೆ (ಅಂದರೆ ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಇಲ್ಲದ ಹೊಸಬರಿಗೆ) 10,000 ರೂಪಾಯಿಗಿಂತ ಹೆಚ್ಚಿನ ಹಣವನ್ನು ಕಳಿಸಿದರೆ, ಆ ಟ್ರಾನ್ಸಾಕ್ಷನ್ ತಕ್ಷಣವೇ ಕ್ಲಿಯರ್ ಆಗುವುದಿಲ್ಲ ಹಾಗೂ ಅವರ ಖಾತೆಗೆ ಹಣ ಜಮೆಯಾಗುವುದಿಲ್ಲ.

ನೀವು ಹಾಕಿದ ಹಣ ಅಕೌಂಟ್‌ನಿಂದ ಕಟ್ ಆಗುತ್ತದೆ, ಆದರೆ ಆ ಹಣ ಮುಂದಿನ ವ್ಯಕ್ತಿಯ ಅಕೌಂಟ್‌ಗೆ ತಲುಪಲು ಕನಿಷ್ಠ 1 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಈ ಒಂದು ಗಂಟೆ ಕಾಲ ಹಣ ಬ್ಯಾಂಕಿಂಗ್ ಸಿಸ್ಟಮ್‌ನಲ್ಲಿ ‘ಲಾಕ್’ ಆಗಿರುತ್ತದೆ! ಇದು ಕೇವಲ ಯುಪಿಐ ಅಂತಹ ಆ್ಯಪ್‌ಗಳಲ್ಲಿ ಮಾತ್ರವಲ್ಲದೇ ಐಎಂಪಿಎಸ್ (IMPS), ನೆಫ್ಟ್ (NEFT), ಮತ್ತು ಆರ್ ಟಿ ಜಿ ಎಸ್ (RTGS) ಗಳಿಗೂ ಅನ್ವಯವಾಗುವ ಸಾಧ್ಯತೆ ಇದೆ.

ಈ 1 ಗಂಟೆ ಡಿಲೇ ನಿಯಮ ಯಾಕೆ ತರುತ್ತಿದ್ದಾರೆ?

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಂಚನೆಗಳು (Cyber Frauds) ಹೆಚ್ಚು ನಡೆಯುತ್ತಿವೆ. ಇದನ್ನು ತಡೆಯುವುದು ಅತ್ಯಗತ್ಯವಾಗಿದೆ, ಇಲ್ಲದಿದ್ದರೆ ಇದು ಮಿತಿಮೀರಿ ಹೋಗುತ್ತದೆ. ನಕಲಿ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ಬೆದರಿಸುವುದು, ಡೀಪ್ ಫೇಕ್ (Deepfake) ಮೂಲಕ ವಿಡಿಯೋ ಕಾಲ್ ಮಾಡಿ ‘ಆಕ್ಸಿಡೆಂಟ್ ಆಗಿದೆ, ಅರ್ಜೆಂಟ್ ಆಗಿ ಹಣ ಹಾಕಿ’ ಎಂದು ಹೇಳುವುದು ಮುಂತಾದ ವಂಚನೆಗಳಿಗೆ ಜನ ಬಲಿಯಾಗುತ್ತಿದ್ದಾರೆ. ಹಣ ಕಳಿಸಿದ ತಕ್ಷಣ ಕಳ್ಳರು ಆ ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿ ಎಸ್ಕೇಪ್ ಆಗುತ್ತಾರೆ

ಈ ಹೊಸ ನಿಯಮದಿಂದ ನೀವು ವಂಚಕರಿಗೆ ಕಳುಹಿಸಿದ ಹಣ ಒಂದು ಗಂಟೆಯ ಕಾಲ ಬ್ಯಾಂಕಿಂಗ್ ಸಿಸ್ಟಮ್‌ನಲ್ಲಿ ಲಾಕ್ ಆಗಿರುತ್ತದೆ. ಆ ಒಂದು ಗಂಟೆಯ ಒಳಗೆ ನೀವು ಮೋಸ ಹೋಗಿರುವುದು ಗೊತ್ತಾದರೆ, ಕೂಡಲೇ ನಿಮ್ಮ ಬ್ಯಾಂಕ್ ಆ್ಯಪ್‌ನಲ್ಲಿ ‘ಕ್ಯಾನ್ಸಲ್’ (Cancel) ಬಟನ್ ಒತ್ತಿ ಹಣವನ್ನು ವಾಪಸ್ ಪಡೆಯಬಹುದು. ಇದು ಸೈಬರ್ ಕಳ್ಳರಿಗೆ ಭಾರಿ ಕಂಟಕವಾಗಲಿದೆ. ಜನರ ಸುರಕ್ಷತೆಯ ದೃಷ್ಟಿಯಿಂದ ಈ ನಿಯಮ ಜಾರಿಗೆ ತರಲು ನಿರ್ಧರಿಸಲಾಗಿದೆ.

ಎಮರ್ಜೆನ್ಸಿ ಟೈಮ್‌ನಲ್ಲಿ ತೊಂದರೆ ಆಗಲ್ವಾ? ವಿನಾಯಿತಿಗಳೇನು?

ನಿಮಗೊಂದು ಪ್ರಶ್ನೆ ಬರಬಹುದು, ಆಸ್ಪತ್ರೆಗಳಲ್ಲಿ ಬಿಲ್ ಕಟ್ಟುವಾಗ ಮತ್ತು ಅಂಗಡಿಗಳಲ್ಲಿ ಹೆಚ್ಚಿನ ಮೊತ್ತದ ಖರೀದಿ ಮಾಡುವಾಗ 10,000 ಕ್ಕಿಂತ ಹೆಚ್ಚು ಬಿಲ್ ಆದರೆ ವ್ಯಾಪಾರಿಗಳಿಗೆ ತೊಂದರೆಯಾಗುವುದಿಲ್ಲವೇ? ಇದಕ್ಕೂ ಆರ್‌ಬಿಐ ವಿನಾಯಿತಿಗಳನ್ನು (Exemptions) ನೀಡಿದೆ:

ಮರ್ಚೆಂಟ್ ಪೇಮೆಂಟ್ಸ್ (Merchant Payments): ನೀವು ಅಂಗಡಿಗಳಲ್ಲಿ ಅಥವಾ ದೊಡ್ಡ ದೊಡ್ಡ ಮಾಲ್‌ಗಳಲ್ಲಿ ಖರೀದಿ ಮಾಡುವಾಗ QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ಪೇ ಮಾಡಿದರೆ ಅದು ತಕ್ಷಣವೇ ಪಾವತಿಯಾಗುತ್ತದೆ. ವ್ಯಾಪಾರಸ್ಥರಿಗೆ ಯಾವುದೇ ಡಿಲೇ ಆಗುವುದಿಲ್ಲ.

ಆಟೋ-ಪೇಮೆಂಟ್ಸ್: ಇಎಂಐ, ಫಾಸ್ಟ್ ಟ್ಯಾಗ್, ಮ್ಯೂಚುವಲ್ ಫಂಡ್ ಎಸ್ಐಪಿ, ಕ್ರೆಡಿಟ್ ಕಾರ್ಡ್ ಬಿಲ್ಸ್ ಇತ್ಯಾದಿ ರಿಕರಿಂಗ್ (Recurring) ಪೇಮೆಂಟ್‌ಗಳಿಗೆ ಇದು ಅನ್ವಯಿಸುವುದಿಲ್ಲ.

ವೈಟ್ ಲಿಸ್ಟಿಂಗ್ (Trusted Payee): ನೀವು ಪದೇ ಪದೇ ಹಣ ಕಳಿಸುವ ನಿಮ್ಮ ಕುಟುಂಬಸ್ಥರು, ಸ್ನೇಹಿತರು ಅಥವಾ ಮನೆಯ ಮಾಲೀಕರ ಅಕೌಂಟ್ ಅನ್ನು ನೀವು ಮೊದಲೇ ‘ಟ್ರಸ್ಟೆಡ್ ಪೇಯಿ’ (Trusted Payee) ಎಂದು ಸೇರಿಸಿಕೊಂಡಿದ್ದರೆ, ಅವರಿಗೆ ಹಣ ಕಳಿಸಿದಾಗ ಯಾವುದೇ ತೊಂದರೆ ಆಗುವುದಿಲ್ಲ, ಡಿಲೇ ಇರುವುದಿಲ್ಲ.

ನಿಮ್ಮ ಅನಿಸಿಕೆ ತಿಳಿಸಿ:

ಮೇ 8, 2026 ರವರೆಗೆ ಈ ಪ್ರಸ್ತಾವನೆಗೆ ಫೀಡ್‌ಬ್ಯಾಕ್ ನೀಡಲು ಆರ್‌ಬಿಐ ಅವಕಾಶ ನೀಡಿದೆ. ಆರ್‌ಬಿಐನ ಈ ಹೊಸ ‘1 ಗಂಟೆಯ ಸೆಕ್ಯುರಿಟಿ ಲಾಕ್’ ರೂಲ್ಸ್ ಬಗ್ಗೆ ನಿಮ್ಮ ಅಭಿಪ್ರಾಯವೇನು? ಇದು ಸೈಬರ್ ವಂಚನೆ ತಡೆಯಲು ಉತ್ತಮ ಐಡಿಯಾನಾ ಅಥವಾ ಜನಸಾಮಾನ್ಯರಿಗೆ ಇದರಿಂದ ಕಿರಿಕಿರಿಯಾಗುತ್ತದಾ? ಕಮೆಂಟ್ ಬಾಕ್ಸ್‌ನಲ್ಲಿ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ!

Leave a Comment