ಭಾರತದ ಮೊದಲ ‘ಮಾತನಾಡುವ ಟ್ರ್ಯಾಕ್ಟರ್’: ರೈತರ ಜೊತೆ ಮಾತನಾಡುತ್ತೆ ಮಹೀಂದ್ರ ಟ್ರ್ಯಾಕ್ಟರ್!

ನಮಸ್ಕಾರ ಸ್ನೇಹಿತರೆ, ‘DD Time Learn’ ಬ್ಲಾಗ್‌ಗೆ ಸ್ವಾಗತ! ಟ್ರ್ಯಾಕ್ಟರ್‌ಗಳಲ್ಲೂ ಸಹ ಇದೀಗ ಹೈ-ಟೆಕ್ನಾಲಜಿ ಬಳಸಿ ಮಾತನಾಡುವ ಟ್ರ್ಯಾಕ್ಟರ್‌ಗಳನ್ನು ಡೆವಲಪ್ ಮಾಡಿದ್ದಾರೆ. ಈ ಟ್ರ್ಯಾಕ್ಟರ್‌ಗಳು ರೈತನೊಂದಿಗೆ ಮಾತನಾಡುತ್ತವೆ, ರೈತನ ಸಮಸ್ಯೆಗಳಿಗೆ ಪರಿಹಾರ ಕೂಡ ಹೇಳುತ್ತವೆ! ಇದು ಅದ್ಭುತ ಫೀಚರ್ಸ್‌ಗಳನ್ನು ಹೊಂದಿದ್ದು, ಇದರ ಸಂಪೂರ್ಣ ಮಾಹಿತಿ ಈ ಬ್ಲಾಗ್‌ನಲ್ಲಿದೆ.

ಪ್ರಖ್ಯಾತ ಆಟೋಮೊಬೈಲ್ ಸಂಸ್ಥೆಯಾದ ಮಹೀಂದ್ರ (Mahindra Tractors) ಇತ್ತೀಚೆಗೆ ಭಾರತದಲ್ಲಿಯೇ ಮೊದಲ ಬಾರಿಗೆ ಮಾತನಾಡುವ ಟ್ರ್ಯಾಕ್ಟರ್ ಅನ್ನು ಪರಿಚಯಿಸಿದೆ. ಕೃತಕ ಬುದ್ಧಿಮತ್ತೆ (AI – Artificial Intelligence) ತಂತ್ರಜ್ಞಾನವನ್ನು ಹೊಂದಿರುವ ಇದು, ತನ್ನ ಧ್ವನಿಯ ಮೂಲಕ ರೈತರಿಗೆ ಸೂಚನೆಗಳು ಮತ್ತು ಸಮಸ್ಯೆ ಪರಿಹಾರದ ಸಲಹೆಗಳನ್ನು ನೀಡುವ ಅದ್ಭುತ ಶಕ್ತಿ ಸಾಮರ್ಥ್ಯ ಹೊಂದಿದೆ.

ವಿಶೇಷವಾಗಿ ಮಹೀಂದ್ರದ 585 DI (50 HP) ಮತ್ತು 575 DI ಮಾಡೆಲ್‌ಗಳಲ್ಲಿ ಈ ವಿಶೇಷ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಈ ಮಾತನಾಡುವ ಟ್ರ್ಯಾಕ್ಟರ್‌ನ ಪ್ರಮುಖ ವೈಶಿಷ್ಟ್ಯಗಳು ಈ ಕೆಳಗಿನಂತಿವೆ:

ಮಹೀಂದ್ರ ‘ಟಾಕಿಂಗ್ ಟ್ರ್ಯಾಕ್ಟರ್’ನ ರೋಚಕ ಫೀಚರ್ಸ್ (Features):

1. ಧ್ವನಿಯ ಮೂಲಕ ಎಚ್ಚರಿಕೆ (Voice Alerts):ಈ ಒಂದು ಟ್ರ್ಯಾಕ್ಟರ್ ರೈತರ ಭಾಷೆಯಲ್ಲಿಯೇ ಉತ್ತರ ಕೊಡುತ್ತದೆ. ಟ್ರ್ಯಾಕ್ಟರ್‌ನಲ್ಲಿ ಆಗುವ ಎಲ್ಲಾ ಸಮಸ್ಯೆಗಳನ್ನು ರೈತನಿಗೆ ತಿಳಿಸುತ್ತದೆ. ಟ್ರ್ಯಾಕ್ಟರ್‌ನಲ್ಲಿ ಡೀಸೆಲ್ ಕಡಿಮೆಯಾದಾಗ, ಇಂಜಿನ್ ಬಿಸಿಯಾದಾಗ ಮತ್ತು ಬ್ಯಾಟರಿ ಡೌನ್ ಆದಾಗ ಈ ಮಾತನಾಡುವ ಟ್ರ್ಯಾಕ್ಟರ್ ಈ ಎಲ್ಲಾ ಮಾಹಿತಿಗಳನ್ನು ಸ್ಪಷ್ಟವಾಗಿ ಧ್ವನಿಯ ಮೂಲಕ ಎಚ್ಚರಿಸುತ್ತದೆ. ಇದೊಂದು ಅದ್ಭುತ ಫೀಚರ್ ಆಗಿದೆ.

2. ಪ್ರಾದೇಶಿಕ ಭಾಷೆಗಳ ಬೆಂಬಲ:ಈ ಟ್ರ್ಯಾಕ್ಟರ್ ಇಂಗ್ಲಿಷ್ ಮತ್ತು ಹಿಂದಿ ಮಾತ್ರವಲ್ಲದೆ, ರೈತರಿಗೆ ಮತ್ತು ಜನರಿಗೆ ಅರ್ಥವಾಗುವ ಅಲ್ಲಿನ ಸ್ಥಳೀಯ ಭಾಷೆಯಲ್ಲಿಯೇ ಧ್ವನಿ ಸೂಚಿಸುವ ಟೆಕ್ನಾಲಜಿಯನ್ನು ಅಳವಡಿಸಿಕೊಳ್ಳಲಾಗಿದೆ. ಇದರಿಂದ ಓದಲು ಬಾರದ ಅನಕ್ಷರಸ್ಥ ರೈತರಿಗೂ ಟ್ರ್ಯಾಕ್ಟರ್‌ನ ಸಮಸ್ಯೆ ಸುಲಭವಾಗಿ ತಿಳಿಯುತ್ತದೆ.

3. ಸ್ಮಾರ್ಟ್ ಆ್ಯಪ್ ಮತ್ತು ಲೊಕೇಶನ್ ಟ್ರ್ಯಾಕಿಂಗ್:ಈ ಟ್ರ್ಯಾಕ್ಟರ್‌ಗಳನ್ನು ಮಹೀಂದ್ರದ ಡಿಜಿಸೆನ್ಸ್ (Digisense) ಅಥವಾ ಮೊಬೈಲ್ ಆ್ಯಪ್ ಮೂಲಕ ಕನೆಕ್ಟ್ ಮಾಡಬಹುದು. ನೀವು ಇರುವ ಸ್ಥಳದಿಂದ ಮತ್ತು ಮನೆಯಿಂದಲೇ ನಿಮ್ಮ ಟ್ರ್ಯಾಕ್ಟರ್ ಯಾರ ಜಮೀನಿನಲ್ಲಿದೆ? ಎಷ್ಟು ಗಂಟೆ ಕೆಲಸ ಮಾಡಿದೆ? ಮತ್ತು ನಿಮ್ಮ ಟ್ರ್ಯಾಕ್ಟರ್‌ನಲ್ಲಿ ಎಷ್ಟು ಡೀಸೆಲ್ ಇನ್ನೂ ಉಳಿದಿದೆ? ಎಂಬೆಲ್ಲಾ ಮಾಹಿತಿಗಳನ್ನು ಮೊಬೈಲ್‌ನಲ್ಲೇ ನೋಡಬಹುದು.4. ಸರ್ವೀಸ್ ಮತ್ತು ಮೈಂಟೆನೆನ್ಸ್ ಅಲರ್ಟ್:ನಿಮ್ಮ ಟ್ರ್ಯಾಕ್ಟರ್‌ಗೆ ಯಾವಾಗ ಆಯಿಲ್ ಬದಲಾಯಿಸಬೇಕು ಮತ್ತು ಸರ್ವೀಸ್ ಮಾಡಿಸಬೇಕು ಎಂಬ ಸಮಯ ಹತ್ತಿರ ಬರುತ್ತಿದ್ದಂತೆ, ಈ ‘AI’ ಸಿಸ್ಟಮ್ ನಿಮಗೆ ಮುಂಚಿತವಾಗಿಯೇ ತಿಳಿಸುತ್ತದೆ. ಇದರಿಂದ ಟ್ರ್ಯಾಕ್ಟರ್ ಮಧ್ಯದಲ್ಲಿ ಕೆಟ್ಟುಹೋಗುವ ಸಮಸ್ಯೆ ತಪ್ಪುತ್ತದೆ ಮತ್ತು ರೈತರಿಗೆ ಟ್ರ್ಯಾಕ್ಟರ್ ನಿರ್ವಹಣೆಗೆ ಉತ್ತಮ ಮಾರ್ಗದರ್ಶನವಾಗುತ್ತದೆ.5. ಹೆವಿ ಡ್ಯೂಟಿ ಪರ್ಫಾರ್ಮೆನ್ಸ್ (Heavy Duty Performance):ತಂತ್ರಜ್ಞಾನದ ಜೊತೆಗೆ ಶಕ್ತಿಗೂ ಮಹೀಂದ್ರ ಹೆಸರುವಾಸಿ. 4-ಸಿಲಿಂಡರ್ ಹೊಂದಿರುವ 50HP ಸಾಮರ್ಥ್ಯದ ಇಂಜಿನ್, ರೋಟರ್, ಕಲ್ಟಿವೇಟರ್ ಅಥವಾ ಭಾರವಾದ ಟ್ರಾಲಿ ಎಳೆಯಲು ಅತ್ಯುತ್ತಮವಾಗಿದೆ. ಜೊತೆಗೆ, ಹೈ-ಟಾರ್ಕ್ ಮತ್ತು ಉತ್ತಮ ಮೈಲೇಜ್ ಕೂಡ ಇದರ ಪ್ಲಸ್ ಪಾಯಿಂಟ್.

Leave a Comment