ಎಚ್ಚರ: 2 ಲಕ್ಷಕ್ಕಿಂತ ಹೆಚ್ಚು ಕ್ಯಾಶ್ ವ್ಯವಹಾರ ಮಾಡಿದರೆ ಬೀಳುತ್ತೆ 100% ದಂಡ! | ನಗದು ವಹಿವಾಟು ಮಿತಿ

Income Tax Rules

ಇಂದಿನ ದಿನಗಳಲ್ಲಿ ಫೋನ್‌ಪೇ (PhonePe), ಗೂಗಲ್ ಪೇ (Google Pay) ಅಂತಹ ಡಿಜಿಟಲ್ ಪೇಮೆಂಟ್ಸ್ (Digital Payments) ಬಳಕೆ ಹೆಚ್ಚಾಗಿದ್ದರೂ, ನಮ್ಮಲ್ಲಿ ಹಲವರು ಇಂದಿಗೂ ದೊಡ್ಡ-ದೊಡ್ಡ ಮೊತ್ತದ ಹಣವನ್ನು ನಗದು (Cash) ರೂಪದಲ್ಲಿಯೇ ವ್ಯವಹಾರ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಅದರಲ್ಲೂ ಹಳ್ಳಿಗಳ ಕಡೆ ಇದು ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ, ನೀವೇನಾದರೂ ಲಕ್ಷಗಟ್ಟಲೆ ಹಣವನ್ನು ಕ್ಯಾಶ್ ರೂಪದಲ್ಲಿಯೇ ಕೊಡುತ್ತಿದ್ದರೆ ಅಥವಾ ಪಡೆಯುತ್ತಿದ್ದರೆ ಈ ಕೂಡಲೇ ಎಚ್ಚೆತ್ತುಕೊಳ್ಳಿ!

ಆದಾಯ ತೆರಿಗೆ ಇಲಾಖೆಯ (Income Tax Department) ನಗದು ವಹಿವಾಟು ಮಿತಿಯ (Cash Transaction Limit) ಹೊಸ ನಿಯಮಗಳ ಪ್ರಕಾರ, ನೀವು ಮಾಡುವ ಒಂದು ಸಣ್ಣ ತಪ್ಪು ನೀವು ಕಷ್ಟಪಟ್ಟು ಕೂಡಿಟ್ಟ ಸಂಪಾದನೆಯನ್ನು ಕಳೆದುಕೊಳ್ಳುವಂತೆ ಮಾಡಬಹುದು. ಅದಕ್ಕೆ ನೀವು ಎಲ್ಲಾ ನಿಯಮಗಳ ಬಗ್ಗೆ ತಿಳಿದುಕೊಂಡು, ಪಾಲಿಸಿಗಳನ್ನು ಅನುಸರಿಸುವುದು ಕಡ್ಡಾಯ. ಇಲ್ಲದಿದ್ದರೆ ನಿಮ್ಮ ಹಣ ದಂಡದ ರೂಪದಲ್ಲಿ ಇನ್ಕಮ್ ಟ್ಯಾಕ್ಸ್‌ಗೆ ಹೋಗುತ್ತದೆ.

ಏನಿದು ನಗದು ವಹಿವಾಟು ಮಿತಿ (Cash Transaction Limit) ನಿಯಮ?

ನೀವು ಯಾವುದೇ ದೊಡ್ಡ ವ್ಯವಹಾರ ಮಾಡುವ ಮೊದಲು ಈ ಕೆಳಗಿನ ನಿಯಮಗಳನ್ನು ಕಡ್ಡಾಯವಾಗಿ ನೆನಪಿನಲ್ಲಿಟ್ಟುಕೊಳ್ಳಲೇಬೇಕು:

2 ಲಕ್ಷದ ಮಿತಿ: ಒಂದು ದಿನದಲ್ಲಿ ಯಾವುದೇ ವ್ಯಕ್ತಿಯಿಂದ ನೀವು 2 ಲಕ್ಷ ರೂಪಾಯಿಗಿಂತ ಹೆಚ್ಚಿನ ನಗದನ್ನು (Cash) ಪಡೆಯುವಂತಿಲ್ಲ.

ಇದು ಯಾವುದೇ ಆಸ್ತಿ ಖರೀದಿ, ವ್ಯಾಪಾರ, ಅಥವಾ ವೈಯಕ್ತಿಕ ಸಾಲದ ರೂಪದಲ್ಲಿದ್ದರೂ ಸರಿ, ಒಂದೇ ದಿನದಲ್ಲಿ ಒಬ್ಬ ವ್ಯಕ್ತಿಯಿಂದ 2 ಲಕ್ಷಕ್ಕಿಂತ ಹೆಚ್ಚು ಕ್ಯಾಶ್ ಇಸ್ಕೊಳ್ಳುವುದು ಕಾನೂನುಬಾಹಿರ.

ನಿಯಮ ಉಲ್ಲಂಘಿಸಿದರೆ ಏನಾಗುತ್ತದೆ? (100% Penalty)

ನೀವೇನಾದರೂ ಈ ನಿಯಮವನ್ನು ಮೀರಿ 2 ಲಕ್ಷಕ್ಕಿಂತ ಹೆಚ್ಚು ಹಣವನ್ನು ನಗದು ರೂಪದಲ್ಲಿ ಪಡೆದರೆ ಅಥವಾ ಬೇರೆಯವರಿಗೆ ಕೊಟ್ಟರೆ, ಆದಾಯ ತೆರಿಗೆ ಇಲಾಖೆಯು ನಿಮ್ಮ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತದೆ.

  • ದಂಡದ ಪ್ರಮಾಣ: ನಿಯಮವನ್ನು ಉಲ್ಲಂಘಿಸಿದರೆ ನೀವು ಪಡೆದ ಹಣದ ಶೇಕಡಾ 100% ರಷ್ಟು ದಂಡವನ್ನು (Penalty) ಕಟ್ಟಬೇಕಾಗುತ್ತದೆ!
  • ಉದಾಹರಣೆಗೆ: ನೀವು ಯಾರಿಂದಲಾದರೂ 3 ಲಕ್ಷ ರೂಪಾಯಿಗಳನ್ನು ನಗದು ರೂಪದಲ್ಲಿ ಪಡೆದರೆ ಅಥವಾ ಕೊಟ್ಟರೂ ಕೂಡ, ಆ ಸಂಪೂರ್ಣ 3 ಲಕ್ಷ ರೂಪಾಯಿಗಳನ್ನು ನೀವು ಆದಾಯ ತೆರಿಗೆ ಇಲಾಖೆಗೆ ದಂಡವಾಗಿ ಪಾವತಿಸಬೇಕಾಗುತ್ತದೆ. ಅಂದರೆ ನಿಮ್ಮ ಕೈಗೆ ಬಂದ ಹಣ ಸಂಪೂರ್ಣವಾಗಿ ಜೀರೋ ಆದಂತೆ!

ಹಾಗಾದರೆ ದೊಡ್ಡ ಮೊತ್ತದ ವ್ಯವಹಾರ ಮಾಡುವುದು ಹೇಗೆ?

ಸರ್ಕಾರವು ಕಪ್ಪು ಹಣ (Black Money) ತಡೆಗಟ್ಟಲು ಮತ್ತು ಡಿಜಿಟಲ್/ಆನ್‌ಲೈನ್ ವ್ಯವಹಾರಗಳನ್ನು ಪ್ರೋತ್ಸಾಹಿಸಲು ಈ ನಿಯಮವನ್ನು ಜಾರಿಗೆ ತಂದಿದೆ. ಹಾಗಾಗಿ, 2 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ವಹಿವಾಟುಗಳನ್ನು ಮಾಡಲು ಈ ಕೆಳಗಿನ ಸುರಕ್ಷಿತ ವಿಧಾನಗಳನ್ನು ಬಳಸಿ:

  • ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ (Bank Transfer – NEFT / RTGS / IMPS)
  • ಚೆಕ್ (Cheque) ಅಥವಾ ಡಿಮ್ಯಾಂಡ್ ಡ್ರಾಫ್ಟ್ (DD)
  • ಯುಪಿಐ ಪೇಮೆಂಟ್ಸ್ (UPI Payments – PhonePe, Google Pay, Paytm)

ಕೊನೆಯ ಮಾತು: ಕಷ್ಟಪಟ್ಟು ದುಡಿದ ಹಣವನ್ನು ದಂಡದ ರೂಪದಲ್ಲಿ ಕಳೆದುಕೊಳ್ಳಬೇಡಿ. ಯಾವುದೇ ದೊಡ್ಡ ವ್ಯವಹಾರಗಳನ್ನು ಮಾಡುವಾಗ ಬ್ಯಾಂಕ್ ಮೂಲಕವೇ ಮಾಡಿ ಮತ್ತು ಸುರಕ್ಷಿತವಾಗಿರಿ.

ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಇದನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಶೇರ್ ಮಾಡಿ. ಆರ್ಥಿಕ ನಿಯಮಗಳು ಹಾಗೂ ಇನ್ನಷ್ಟು ಉಪಯುಕ್ತ ಮಾಹಿತಿಗಳಿಗಾಗಿ DD Time Learn ಗೆ ಭೇಟಿ ನೀಡುತ್ತಿರಿ.

Leave a Comment