ನಮಸ್ಕಾರ ಸ್ನೇಹಿತರೇ, ನಮ್ಮ ಬ್ಲಾಗ್‌ನ ಮತ್ತೊಂದು ತಾಜಾ ಸುದ್ದಿ ಅಪ್ಡೇಟ್‌ಗೆ ನಿಮಗೆಲ್ಲರಿಗೂ ಸ್ವಾಗತ.
ಮಾರ್ಚ್ ತಿಂಗಳು ಬಂದರೆ ಸಾಕು, ಜನರ ನೆತ್ತಿ ಸುಡುವಬಿಸಿಲಿನ ತಣ್ಣೀರ ಸ್ನಾನಕ್ಕೆ ಜನ ಹೈರಾಣಾಗುವುದು ಸಾಮಾನ್ಯ ಆದರೆ ಈ ವರ್ಷ ವರಣದೇವ ಬೇರೆ ಲೆಕ್ಕಾಚಾರದಲ್ಲಿ ಇದ್ದಾನೆ ರಾಜ್ಯದ ಜನತೆ ಬೇಸಿಗೆಯ ಬಿಸಿಲಿನಲ್ಲಿ ಬಳಲುತ್ತಿರುವಾಗ ದಿಢೀರನೆ ಹವಾಮಾನದಲ್ಲಿ ಭಾರಿ ಬದಲಾವಣೆಯಾಗಿದೆ. ಬಿರು ಬಿಸಿಲಿನಿಂದಕಂಗೆಟ್ಟಿದ್ದ ಜನರಿಗೆ ಮಳೆಯಾಗುತ್ತಿರುವುದು ಒಂದೆಡೆ ಖುಷಿ ತಂದಿದ್ದರೆ, ಮತ್ತೊಂದೆಡೆ ಇದೇ ಮಳೆ ವಿಕೋಪಕ್ಕೆ ತಿರುಗಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ
ಕರ್ನಾಟಕ ರಾಜ್ಯದ ಹಲವು ಭಾಗದಲ್ಲಿ ಮುಂಗಾರು ಪೂರ್ವ ಮಳೆಯ ಅಕ್ಬರ್ ಜೋರಾಗಿದ್ದು ಅದರಲ್ಲಿ ಕೆಲಸ ಆಗಿಲ್ಲ. ಬಾರಿ ಗಾಳಿ ಸಹಿತ ‘ಆಲಿಕಲ್ಲು ಮಳೆ’Hailstorm) ಸುರಿಯುತ್ತಿದೆ. ಜನರ ಆಶ್ಚರ್ಯಕ್ಕೆ ಒಳಗಾಗಿದ್ದಾರೆ. ರಸ್ತೆಗಳಲ್ಲಿಬಿಳಿ ಹಿಮದಂತೆ ಆಲಿಕಲ್ಲುಗಳಿಂದ ಆವೃತವಾಗಿದ್ದು, ನೋಡಲು ಅಪ್ಪಟ ಕಾಶ್ಮೀರದ (Kashmir)ದೃಶ್ಯಗಳನ್ನು ನೆನಪಿಸುತ್ತಿವೆ.ಆದರೆ ಈ ಸೋಲು ಸೌಂದರ್ಯದಿಂದ ಹಿಂದೆ ಬಾರಿ ದೊಡ್ಡ ಅವಾಂತರವೇ ಸೃಷ್ಟಿಯಾಗಿದೆ ಸಂಪೂರ್ಣ ವರದಿಯನ್ನು ಇಲ್ಲಿ ತಿಳಿಯೋಣ.
ಹುಬ್ಬಳ್ಳಿಯಲ್ಲಿ ವರುಣನ ರೌದ್ರಾವತಾರ: 1 ಗಂಟೆಗೂ ಹೆಚ್ಚು ಕಾಲ ಆಲಿಕಲ್ಲು ಮಳೆ!
“ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿಯಾದ ಹುಬ್ಬಳ್ಳಿ (Hubballi) ಈ ಅಕಾಲಿಕ ಮಳೆಯ ಅಬ್ಬರಕ್ಕೆ ಅಕ್ಷರಶಃ ನಲುಗಿಹೋಗಿದೆ. ಹುಬ್ಬಳ್ಳಿ ನಗರದಲ್ಲಿ ಸತತವಾಗಿ ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆಯ ಜೊತೆಗೆ, ಭಾರಿ ಗಾತ್ರದ ಆಲಿಕಲ್ಲುಗಳು ಏಕಾಏಕಿ ಸುರಿದಿವೆ. ಮಳೆಯ ಅಬ್ಬರ ಎಷ್ಟಿತ್ತೆಂದರೆ ಹುಬ್ಬಳ್ಳಿಯ ರಸ್ತೆಗಳು, ಮನೆಗಳ ಛಾವಣಿಗಳು, ವಾಹನಗಳ ಮೇಲೆಲ್ಲಾ ದಪ್ಪನೆಯ ಆಲಿಕಲ್ಲುಗಳ ಪದರವೇ ಸೃಷ್ಟಿಯಾಗಿತ್ತು.
ಸಾಮಾನ್ಯವಾಗಿ ನಾವು ಟಿವಿಯಲ್ಲಿ, ಸಿನಿಮಾಗಳಲ್ಲಿ ಕಾಶ್ಮೀರದಲ್ಲಿ ಹಿಮ ಬೀಳುವ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಹುಬ್ಬಳ್ಳಿಯ ಜನತೆಗೆ ತಮ್ಮೂರಿನ ರಸ್ತೆಗಳೇ ಆ ರೀತಿ ಬೆಳ್ಳಗೆ ಕಂಗೊಳಿಸುತ್ತಿರುವುದು ಅಚ್ಚರಿ ಮೂಡಿಸಿತ್ತು. ಆದರೆ ಈ ಅಚ್ಚರಿ ಹೆಚ್ಚು ಹೊತ್ತು ಉಳಿಯಲಿಲ್ಲ; ಏಕೆಂದರೆ ಈ ಆಲಿಕಲ್ಲು ಮಳೆ ತಂದಿಟ್ಟ ಫಜೀತಿ ಅಷ್ಟಿಷ್ಟಲ್ಲ
ಗ್ರಾಹಕರು ಪಾರು: ಅರ್ಬನ್ ಓಯಸಿಸ್ ಮಾಲ್ ಮೇಲ್ಛಾವಣಿ ಕುಸಿತ!
ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ (Gokul Road) ಪ್ರಸಿದ್ಧ ‘ಅರ್ಬನ್ ಓಯಸಿಸ್ ಮಾಲ್’ (Urban Oasis Mall) ನಲ್ಲಿ ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಆಲಿಕಲ್ಲು ಮಳೆ ಹಾಗೂ ಬಿರುಗಾಳಿಯ ರಭಸಕ್ಕೆ ಮಾಲ್‌ನ ಮೇಲ್ಛಾವಣಿಯ (Roof) ಒಂದು ಭಾಗ ದಿಢೀರನೆ ಕುಸಿದು ಬಿದ್ದಿದೆ.
ರಜಾ ದಿನವಾದ್ದರಿಂದ ಮಾಲ್‌ನಲ್ಲಿ ಗ್ರಾಹಕರ ದಟ್ಟಣೆ ಹೆಚ್ಚಾಗಿತ್ತು. ಮೇಲ್ಛಾವಣಿ ಕುಸಿಯುತ್ತಿದ್ದಂತೆಯೇ ಭಯಭೀತರಾದ ಗ್ರಾಹಕರು ಹಾಗೂ ಮಾಲ್‌ನ ಸಿಬ್ಬಂದಿ, ಅಂಗಡಿಗಳ ವ್ಯಾಪಾರಿಗಳು ತಮ್ಮ ಪ್ರಾಣ ಉಳಿಸಿಕೊಳ್ಳಲು ಹೊರಗಡೆ ಓಡಿಬಂದಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಆದರೆ ಮಾಲ್‌ನ ಒಳಗಿದ್ದ ವಸ್ತುಗಳಿಗೆ ಹಾನಿಯಾಗಿದೆ.
ಜಲಾವೃತಗೊಂಡ ಹುಬ್ಬಳ್ಳಿಯ ಪ್ರಮುಖ ರಸ್ತೆಗಳು
ಸತತವಾಗಿ ಸುರಿದ ಭಾರಿ ಮಳೆಯಿಂದಾಗಿ ಹುಬ್ಬಳ್ಳಿಯ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಗರದ ಹೃದಯಭಾಗದಲ್ಲಿರುವ ಚನ್ನಮ್ಮ ವೃತ್ತ (Chennamma Circle) ಹಾಗೂ ರಾಯಣ್ಣ ವೃತ್ತದ (Rayanna Circle) ರಸ್ತೆಗಳು ಸಂಪೂರ್ಣವಾಗಿ ಜಲಾವೃತಗೊಂಡು ಕೆರೆಯಂತಾಗಿದ್ದವು. ರಸ್ತೆಯಲ್ಲಿ ಮೊಣಕಾಲುದ್ದ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. ದ್ವಿಚಕ್ರ ವಾಹನಗಳು ನೀರಿನಲ್ಲಿ ಸಿಲುಕಿ ಕೆಟ್ಟುಹೋದ ದೃಶ್ಯಗಳು ಸಾಮಾನ್ಯವಾಗಿತ್ತು. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಸ್ಥಳೀಯರು ರಾತ್ರಿಯಿಡೀ ಜಾಗರಣೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಬಿಸಿಲ ನಗರಿ ಕಲಬುರಗಿಯಲ್ಲೂ ‘ಕಾಶ್ಮೀರ’ದ ಫೀಲ್!
ಬಿಸಿಲಿಗೆ ಹೆಸರಾದ ಕಲಬುರಗಿ (Kalaburagi) ಜಿಲ್ಲೆಯಲ್ಲೂ ವರುಣನ ಅಬ್ಬರ ಕಡಿಮೆಯಿಲ್ಲ. ಕಲಬುರಗಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿರುಗಾಳಿ ಸಹಿತ ಭಾರಿ ಆಲಿಕಲ್ಲು ಮಳೆಯಾಗಿದೆ. ರಸ್ತೆಗಳೆಲ್ಲವೂ ಹಿಮದ ಹೊದಿಕೆ ಹೊದ್ದಂತೆ ಬೆಳ್ಳಗೆ ಕಂಗೊಳಿಸುತ್ತಿದ್ದು, ಇಲ್ಲಿಯೂ ಕೂಡ ಕಾಶ್ಮೀರದಂತಹ ವಾತಾವರಣ ಸೃಷ್ಟಿಯಾಗಿತ್ತು. ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಮಳೆ ತಂಪೆರೆದರೂ, ಈ ಮಟ್ಟದ ಆಲಿಕಲ್ಲು ಮಳೆ ಕೃಷಿ ಭೂಮಿಗೆ ಅಪಾರ ಹಾನಿ ಮಾಡಿರುವ ಆತಂಕ ಎದುರಾಗಿದೆ.
ರೈತರಿಗೆ ಕಣ್ಣೀರು ತರಿಸಿದ ಅಕಾಲಿಕ ಮಳೆ
ನೋಡಲು ಈ ಆಲಿಕಲ್ಲು ಮಳೆಯ ದೃಶ್ಯಗಳು ಸುಂದರವಾಗಿ ಕಂಡರೂ, ರೈತರ ಪಾಲಿಗೆ ಇದು ಬರಸಿಡಿಲಾಗಿ ಎರಗಿದೆ. ಮಾರ್ಚ್-ಏಪ್ರಿಲ್ ತಿಂಗಳು ಎಂದರೆ ಮಾವು, ದ್ರಾಕ್ಷಿ, ಬಾಳೆ, ಹಾಗೂ ಪಪ್ಪಾಯದಂತಹ ತೋಟಗಾರಿಕಾ ಬೆಳೆಗಳು ಕೈಗೆ ಬರುವ ಸಮಯ. ಆದರೆ ಈ ಭಾರಿ ಗಾತ್ರದ ಆಲಿಕಲ್ಲುಗಳು ಬಿದ್ದು ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಮರದ ಮೇಲಿದ್ದ ಮಾವಿನ ಕಾಯಿಗಳು ನೆಲಕ್ಕುರುಳಿವೆ, ಬಾಳೆ ಗಿಡಗಳು ಗಾಳಿಗೆ ಮುರಿದು ಬಿದ್ದಿವೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಕೂಡಲೇ ಬೆಳೆ ಹಾನಿ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು ಎಂಬುದು ರೈತರ ಆಗ್ರಹವಾಗಿದೆ.
ಕೊನೆಯ ಮಾತು
ಒಟ್ಟಿನಲ್ಲಿ ಪ್ರಕೃತಿಯ ಮುನಿಸಿಗೆ ರಾಜ್ಯದ ಹಲವು ಭಾಗಗಳು ತತ್ತರಿಸಿ ಹೋಗಿವೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಮುಂದಿನ ಒಂದೆರಡು ದಿನಗಳ ಕಾಲ ರಾಜ್ಯದ ವಿವಿಧೆಡೆ ಇದೇ ರೀತಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಸಾರ್ವಜನಿಕರು, ವಿಶೇಷವಾಗಿ ವಾಹನ ಸವಾರರು ಹಾಗೂ ರೈತರು ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ.
ಸ್ನೇಹಿತರೇ, ನಿಮ್ಮೂರಿನಲ್ಲಿ ಹವಾಮಾನ ಹೇಗಿದೆ? ಬಿಸಿಲಿನ ತಾಪ ಹೆಚ್ಚಾಗಿದೆಯಾ ಅಥವಾ ನಿಮ್ಮ ಕಡೆಯೂ ಮಳೆಯಾಗುತ್ತಿದೆಯಾ? ಕೆಳಗಿನ ಕಮೆಂಟ್ ಬಾಕ್ಸ್‌ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.
- ರಿಯಲ್ಮಿ ಭರ್ಜರಿ ಕೊಡುಗೆ: 8000mAh ಬ್ಯಾಟರಿ ಮತ್ತು 144Hz ಡಿಸ್ಪ್ಲೇ ಹೊಂದಿರುವ ಹೊಸ ರಿಯಲ್ಮಿ P4R 5G ಮೊಬೈಲ್ ಕೇವಲ 16,999 ರೂಪಾಯಿಗೆ ಬಿಡುಗಡೆ! ಸಂಪೂರ್ಣ ಫೀಚರ್ಸ್ ಇಲ್ಲಿದೆ ನೋಡಿನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಹೊಸ ಬ್ಲಾಗ್ ಲೇಖನಕ್ಕೆ ನಿಮಗೆ ಆದರದ ಸ್ವಾಗತ ಸುಸ್ವಾಗತ. ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಸದ್ಯದ ಮಟ್ಟಿಗೆ ಬಜೆಟ್ ಬೆಲೆಯ 5G ಸ್ಮಾರ್ಟ್ಫೋನ್ಗಳಿಗೆ ಭಾರಿ ಪ್ರಮಾಣದ ಬೇಡಿಕೆ ಮತ್ತು ಕ್ರೇಜ್ ಸೃಷ್ಟಿಯಾಗಿದೆ. ಗ್ರಾಹಕರು ಯಾವಾಗಲೂ ಕಡಿಮೆ ಬೆಲೆಯಲ್ಲಿ ಹೆಚ್ಚು … Read more
- ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ಹೆಸರು ಸೇರ್ಪಡೆ 2026: ಸಾರ್ವಜನಿಕರಿಗೆ ಭರ್ಜರಿ ಸಿಹಿಸುದ್ದಿ! ಇಂದಿನಿಂದಲೇ ಮೊಬೈಲ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಹೊಸ ಬ್ಲಾಗ್ ಲೇಖನಕ್ಕೆ ನಿಮಗೆ ಆದರದ ಸ್ವಾಗತ ಸುಸ್ವಾಗತ. ಕರ್ನಾಟಕದಾದ್ಯಂತ ಲಕ್ಷಾಂತರ ಕುಟುಂಬಗಳು ಕಳೆದ ಹಲವು ತಿಂಗಳುಗಳಿಂದ ಕಾತುರದಿಂದ ಕಾಯುತ್ತಿದ್ದ ಆ ಒಂದು ಅತ್ಯಂತ ಪ್ರಮುಖವಾದ ಸಿಹಿಸುದ್ದಿಯನ್ನು ಆಹಾರ ಇಲಾಖೆಯು ಇವತ್ತು ಅಧಿಕೃತವಾಗಿ ಪ್ರಕಟಿಸಿದೆ. ಹೌದು, ರಾಜ್ಯದಲ್ಲಿ … Read more
- ಬಜೆಟ್ ಬೆಲೆಯಲ್ಲಿ ಗೇಮಿಂಗ್ ಪ್ರಿಯರಿಗೆ ಬಂಪರ್ ಆಫರ್: 1000 ರೂಪಾಯಿ ಒಳಗಿನ ಟಾಪ್ 5 ಅತ್ಯುತ್ತಮ ಗೇಮಿಂಗ್ ಗ್ಯಾಜೆಟ್ಗಳ ಪಟ್ಟಿ ಇಲ್ಲಿದೆ ನೋಡಿನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಹೊಸ ಬ್ಲಾಗ್ ಲೇಖನಕ್ಕೆ ನಿಮಗೆ ಆದರದ ಸ್ವಾಗತ ಸುಸ್ವಾಗತ. ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಮೊಬೈಲ್ ಹಾಗೂ ಕಂಪ್ಯೂಟರ್ ಗೇಮಿಂಗ್ ಕ್ರೇಜ್ ದಿನದಿಂದ ದಿನಕ್ಕೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಪ್ರತಿಯೊಬ್ಬರಿಗೂ ತಮ್ಮ ಮನೆಯಲ್ಲಿ ಒಂದು … Read more
- ಕರ್ನಾಟಕ ಟ್ರಾಫಿಕ್ ಫೈನ್ ಶೇ 50 ರಿಯಾಯಿತಿ 2026: ಬಾಕಿ ಇರುವ ಸಂಚಾರಿ ದಂಡ ಪಾವತಿಗೆ ಬಂಪರ್ ರಿಯಾಯಿತಿ ಘೋಷಿಸಿದ ಸರ್ಕಾರ! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಹೊಸ ಬ್ಲಾಗ್ ಲೇಖನಕ್ಕೆ ನಿಮಗೆ ಆದರದ ಸ್ವಾಗತ ಸುಸ್ವಾಗತ. ಕರ್ನಾಟಕದ ಎಲ್ಲಾ ವಾಹನ ಸವಾರರಿಗೆ ರಾಜ್ಯ ಸರ್ಕಾರವು ಇವತ್ತು ಒಂದು ಭರ್ಜರಿ ಮತ್ತು ಅತ್ಯಂತ ದೊಡ್ಡ ಸಿಹಿಸುದ್ದಿಯನ್ನು ನೀಡಿದೆ. ನಿಮ್ಮ ಬೈಕ್, ಕಾರ್ ಅಥವಾ ಯಾವುದೇ ವಾಹನದ … Read more
- PBKS vs RCB ಪ್ರಿವ್ಯೂ: ಪ್ಲೇ-ಆಫ್ಗೇರಲು ಆರ್ಸಿಬಿಗೆ ಬೇಕು 1 ಗೆಲುವು; ಸೋಲಿನ ಸುಳಿಯಲ್ಲಿ ಪಂಜಾಬ್!ನಮಸ್ಕಾರ ಸ್ನೇಹಿತರೆ, ‘DD Time Learn’ ಬ್ಲಾಗ್ಗೆ ಸ್ವಾಗತ! ಐಪಿಎಲ್ 2026ರ (IPL 2026) ಪ್ಲೇ-ಆಫ್ ರೇಸ್ ರಂಗೇರುತ್ತಿದ್ದು, ಇಂದಿನ ಭಾನುವಾರದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಪಂಜಾಬ್ ಕಿಂಗ್ಸ್ (PBKS) ತಂಡಗಳು ಮುಖಾಮುಖಿಯಾಗುತ್ತಿವೆ. ಕಳೆದ … Read more